7 Aug

28ನೇ ವರ್ಷಕ್ಕೆ ಕಾಲಿಟ್ಟ ಬೆಳ್ತಂಗಡಿ ಧರ್ಮಪ್ರಾಂತ್ಯ

28ನೇ ವರ್ಷಕ್ಕೆ ಕಾಲಿಟ್ಟ ಬೆಳ್ತಂಗಡಿ ಧರ್ಮಪ್ರಾಂತ್ಯ

1999 ಆಗಸ್ಟ್ 4ರಂದು ಉದ್ಘಾಟನೆಗೊಂಡು ಅತಿ ವಂದನೀಯ ಮಾರ್ ಲಾರೆನ್ಸ್ ಮುಕ್ಕುಯಿಯವರ ನಾಯಕತ್ವದಲ್ಲಿ ಕರ್ನಾಟಕದ ದಕ್ಷಿಣ ಕನ್ನಡ , ಉಡುಪಿ ಮತ್ತು ಕೊಡುಗು ಜಿಲ್ಲೆಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿ, ಇದೀಗ 27 ವರ್ಷಗಳನ್ನು ಪೂರ್ಣಗೊಳಿಸಿ 28ನೆೇ ವರ್ಷಕ್ಕೆ ಕಾಲಿಟ್ಟಿದೆ. ಈ ಧರ್ಮಪ್ರಾಂತ್ಯದಿಂದ ನಮ್ಮ ಸಮಾಜ ಸ್ವೀಕರಿಸಿದ ಸೇವೆಗಳು ಶ್ಲಾಘನೀಯ. ಸಮಾಜ ಸೇವೆಗೆ ಕ್ರೈಸ್ತರ ಕೊಡುಗೆ ಅಪಾರ. ಆರೋಗ್ಯ, ಶೈಕ್ಷಣಿಕ, ಸಾಮಾಜಿಕ ಮತ್ತು ಮಹಿಳಾ ಶಕ್ತೀಕರಣಕ್ಕೆ ಧರ್ಮಪ್ರಾಂತ್ಯದಿಂದ ಆದಂತ ಕೊಡುಗೆ ಶ್ರೇಷ್ಠ. ಧ್ವಿತಿಯ ಧರ್ಮಾಧ್ಯಕ್ಷರಾಗಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಅಧ್ಯಕ್ಷರಾದ ಪರಮಪೂಜ್ಯ ಜೇಮ್ಸ್ ಪಟ್ಟೇರಿಲ್ ರವರು ಸಹ ಅಷ್ಟೇ ಉತ್ಸಹದಿಂದ ಸಮಾಜಸೇವೆ ಮತ್ತು ಧರ್ಮಪ್ರಾಂತ್ಯದ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ ಎಂಬುದು ಸಂತಸದ ವಿಷಯವೇ ಆಗಿದೆ.

ಆರೋಗ್ಯ ಕ್ಷೇತ್ರ:

ಸಮಾಜದ ಅಂಚಿಗೆ ತಳ್ಳಲ್ಪಡುವ ಏಡ್ಸ್ ರೋಗಿಗಳು ಹಾಗು ಕ್ಯಾನ್ಸರ್ ಬಾಧಿತ ಬಡಜನರ ಆರೈಕೆ ಮತ್ತು ಬೆಂಬಲ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ದಕ್ಷಿಣ ಕನ್ನಡ ರೂರಲ್ ಡೆವಲಪ್ ಮೆಂಟ್ ಸೊಸೈಟಿ (DKRDS) ವತಿಯಿಂದ ಅಭೂತಪೂರ್ವವಾಗಿ ನಡೆಯುತ್ತಿದೆ. ಏಡ್ಸ್ ರೋಗ ಪೀಡಿತರ ಮನೆ ಮನೆಗೂ ಭೇಟಿ ನೀಡಿ ಅವರ ದೈಹಿಕ ಅರೋಗ್ಯ ಮತ್ತು ಮಾನಸಿಕ ಆರೈಕೆ, ಆರ್ಥಿಕ ಸಂಕಷ್ಟಗಳನ್ನು ವಿಚಾರಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಉದಾರ ವ್ಯಕ್ತಿಗಳನ್ನು ಸಂಪರ್ಕಿಸಿ ಅವರ ಮೂಲಕ ಸಾದ್ಯವಾದ ಎಲ್ಲಾ ನೆರವುಗಳನ್ನು ತಲುಪಿಸುತ್ತಿದೆ. ಮಹಿಳಾ ಶಾಕ್ತಿಕರಣದ ಅಂಗವಾಗಿ ವಿವಿಧ ಸ್ವಯಂ ಸಹಾಯಕ ಸಂಘಗಳ ಮೂಲಕ ಮತ್ತು ತಾಲೂಕು ಒಕ್ಕೊಟದ ಮೂಲಕ ನೆರವನ್ನು ನೀಡುತ್ತಿದೆ. ಅನೇಕ ಪಟ್ಟಣ ಮತ್ತು ಗ್ರಾಮಗಳಲ್ಲಿ ಕ್ಯಾನ್ಸರ್ ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕಗಳು ಮತ್ತು ಅಭಿಯಾನಗಳನ್ನು ನಡೆಸುತ್ತಿದೆ. ಕ್ಯಾನ್ಸರ್ ರೋಗಿಗಳಿಗಾಗಿ ಪ್ರತ್ಯೇಕ ನಿಧಿ ಸಂಗ್ರಹಿಸಿ ಆದಷ್ಟು ಜನರನ್ನು ಬೆಂಬಲಿಸಲು ಪ್ರಯತ್ನಿಸುತ್ತಿದೆ. ಅದೇ ವಿವಿಧ ಆಸ್ಪತ್ರೆಗಳ ಸಹಯದೊಂದಿಗೆ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ.

ಶಿಕ್ಷಣ ಕ್ಷೇತ್ರ:

ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರು ಹೇಗೆ ದೀಪಸ್ತಂಭಗಳಾಗಿ ನಿಂತಿದೆ ಎಂಬುದು ಸಮಾಜಕ್ಕೆ ಅರಿವಿದೆ. ಬೆಳ್ತಂಗಡಿ ಧರ್ಮಪ್ರಾಂತ್ಯವೂ ನಮ್ಮ ಧಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವು ಒಳನಾಡಿನ ಹಳ್ಳಿಗಲ್ಲಿ ಶಾಲೆಗಳನ್ನು ಸ್ಥಾಪಿಸಿ ಜನರ ನೆರವಿಗೆ ನಿಂತಿದೆ. ಕಲ್ಪತರು ನರ್ಸಿಂಗ್ ಸ್ಕೂಲ್, ಬಂಗಾಡಿ ಮರಿಯಾಂಬಿಕ ಶಾಲೆ, ಗಂಡಿಬಾಗಿಲಿನ ಸಂತ ಥಾಮಸ್ ಶಾಲೆ ಮುಂತಾದವು ಇದಕ್ಕೆ ಉದಾಹರಣೆಗಳು. ಶಿಕ್ಷಣವು ಸೇವೆಯೆಂದು ಮರೆಯದಿರುವುದರಿಂದ ಇದರಲ್ಲಿ ಕೆಲವು ಶಾಲೆಗಳು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದು ಮಕ್ಕಳ ಉನ್ನತಿಗಾಗಿ ಅನೇಕ ಧಾರ್ಮ ಭಗಿನಿಯರು ಹಾಗು ಧರ್ಮಗುರುಗಳು ಬಿ.ಎಡ್ ಮುಗಿಸಿ ಶಾಲೆಗಳಲ್ಲಿ ಯಾವುದೇ ಪ್ರತಿಫಲವಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ.

ಕೃಷಿ ಮತ್ತು ವಾಣಿಜ್ಯ ಬೆಳೆಗಳ ಅಭಿವೃದ್ಧಿ

ನಮ್ಮ ಜಿಲ್ಲೆಗಳಲ್ಲಿ ಕೃಷಿ ಮತ್ತು ವಾಣಿಜ್ಯ ಬೆಳೆಗಳ ಅಭಿವೃದ್ದಿಗಾಗಿ ಸಿರೋ ಮಲಬಾರ್ ಜನತೆಯ ಕೊಡುಗೆ ದೊಡ್ಡದು ಎಂಬುದರಲ್ಲಿ ಎರಡು ಮಾತಿಲ್ಲ. ಕೇರಳದ ವಿವಿಧ ಕಡೆಗಳಿಗೆ ಭೇಟಿ ನೀಡಿ ಅಲ್ಲಿಂದ ವಿವಿಧ ಬಗೆಯ ರಬ್ಬರ್ , ಕಪ್ಪು ಮೆಣಸು, ತೆಂಗು ಇವುಗಳನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಪರಿಚಯಿಸುವಲ್ಲಿ ಸೀರೊ ಮಲಬಾರ್ ಜನತೆ ಮುಂದಾಳುಗಳಾಗಿ ನಿಂತಿದ್ದರು. ಅದರಲ್ಲೂ ಕೆಲವು ವರ್ಷಗಳಿಂದ ನಮ್ಮಲ್ಲಿ ಸುಲಭವಾಗಿರುವ ಡ್ರ್ಯಾಗನ್ ಫ್ರೂಟ್, ರಾಂಬೊಟ್ಟನ್, ಫಿಲಾಸಾನ್ ಇನ್ನೂ ಅನೇಕ ಹೊಸ ತಳಿಗಳ ಹಣ್ಣುಗಳನ್ನೂ ಪರಿಚಯಿಸಿ ಅದನ್ನು ವಾಣಿಜ್ಯ ಬೆಳಗಳಾಗಿ ನಮ್ಮ ನಮ್ಮನಾಡಿನಲ್ಲಿ ಬೆಳೆಸಲು ಸಾಧ್ಯವೆಂಬುದು ಸಾದಿಸಿ ತೋರಿಸಿದವರು ಇವರು.

ವಿವಿಧ ಧರ್ಮಕೇಂದ್ರಗಳ ಮುತುಹರ್ಜಿಯಲ್ಲಿ ಧರ್ಮಗುರುಗಳ ಧರ್ಮ ಭಗಿನಿಯರ ಹಾಗು ಕ್ರೈಸ್ತ ಬಾಂಧವರ ನೇತುತ್ವದಲ್ಲಿ ಹತ್ತು ಹಲವು ಚಟುವಿಟಿಕೆಗಳ ಮೂಲಕ ಆಯಾಯಾ ನಾಡಿನ ನೆರವಿಗೆ ನಿಲ್ಲುವಲ್ಲಿ ಸೀರೊ ಮಲಾಬಾರ್ ಜನತೆಯ ಕೊಡುಗೆ ಅನುಕರಣೀಯವಾಗಿದೆ. ಅದರಲ್ಲೂ ಕಳಂಜ ಕ್ರಿಶ್ಚಿಯನ್ ಬ್ರತರ್ಸ್ ನಂತಹ ಹಲವು ಯುವಜನ ಗುಂಪುಗಳು ಜನ ಸೇವೆಗೆ ನೆಲೆನಿಲ್ಲುವುದು ಅದಕ್ಕೆ ಉದಾಹರಣೆಯಾಗಿದೆ. ಬೆಳ್ತಂಗಡಿ ಧರ್ಮಪ್ರಾಂತ್ಯವೂ ತನ್ನ 27ವರ್ಷಗಳ ಸೇವೆ ಮತ್ತು ಮುಂದಾಳುತ್ವವನ್ನು ನೆನೆದುಕೊಳ್ಳುವಾಗ ಸಮಾಜಕ್ಕೆ ಧರ್ಮಪ್ರಾಂತ್ಯವೂ ನೀಡಿದ ಕೊಡಿಗೆಗಳನ್ನು ಸ್ಮರಿಸುವುದು ಉತ್ತಮ ಮತ್ತು ಸಮಾಜಕ್ಕೆ ಸ್ಪೋರ್ತಿದಾಯಕವಾಗಿದೆ.