24 Jun

The gold medal in the 9th National Level IBSA Powerlifting Championship

ಬೆಳ್ತಂಗಡಿ: ಮಣಿಪಾಲ್ ನಲ್ಲಿ ನಡೆದ 9 ನೆಯ ರಾಷ್ಟ್ರೀಯ ಮಾಟ್ಟದ ಐಬಿಎಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ದೃಷ್ಟಿ ಸಮಸ್ಯೆ ಇರುವವರ ( visually impaired) ಸ್ಪರ್ಧೆಯಲ್ಲಿ ಬೆಳ್ತಂಗಡಿ, ಸಂತ ಲಾರೆನ್ಸ್ ಕಥಿಡ್ರಲ್ ಧರ್ಮಕೇಂದ್ರದ ನಂದಳತ್ ಸಿರಿಲ್ ಜೋಸೆಫ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಜೂನ್ 21 ಹಾಗೂ 22 ರಂದು ರಾಷ್ಟ್ರ ಮಟ್ಟದ ಈ ಪಂದ್ಯಾಟ ಮಣಿಪಾಲ್ ನಲ್ಲಿ ನಡೆದಿತ್ತು. ಚಿನ್ನದ ಪದಕದೊಂದಿಗೆ ಪವರ್ ಲಿಫ್ಟಿಂಗ್ ಪ್ರಥಮ ಸ್ಥಾನವನ್ನು ಪಡೆದ ಸಿರಿಲ್ ಜೋಸೆಫ್ ರವರಿಗೆ ಧರ್ಮಾಧ್ಯಕ್ಷರಾದ ಅತಿ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಅಭಿನಂದನೆಗಳನ್ನು ಸಲ್ಲಿಸಿದರು.